Inconsumercomplaints.com » Internet & Web » Review / complaint: Air cel - Amount didecting without my permision | News #495420

Air cel
Amount didecting without my permision

ಇವರಿಗೆ

ಗ್ರಾಹಕ ನ್ಯಾಯಾಲಯ

ಬೆಂಗಳೂರು

ಇಂದ

ಬೈರೇಗೌಡ ಪಾರ್ವತೀಪುರ

ನೆಲಮಂಗಲ ತಾ" ಬೆಂಗಳೂರು ಗ್ರಾಮಾಂತರ ಜಿಲ್ಲೆ

ಮೊಬೈಲ್ : 8892279989 Email: [email protected]

ವಿಷಯ : ಎರ್ ಸೆಲ್ ನಿಂದ ಆದ ನಸ್ಟದ ಪರಿಹಾರದ ಬಗ್ಗೆ

ಸ್ವಾಮಿ ಬೈರೇಗೌಡ ಆದ ನಾನು ಅಮೆರಿಕ ಮೂಲದ ಸಿಯರ ಸಾಪ್ಟ್ ವೇರ್ ಡಿಸೈನ್ ಸೆಂಟರ್ ಜೆ.ಪಿ.ನಗರ ಇಲ್ಲಿ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಅಮೆರಿಕ ಮೂಲದ ಕಂಪನಿಯದ್ದುದ್ದರಿಂದ ರಾತ್ರಿ ಪಾಳಿ ಕೆಲಸ ಕಡ್ಡಾಯವಾಗಿರುತ್ತದೆ. ನಮ್ಮ ಕೆಲಸಗಳೆಲ್ಲವು ಅಂತರ್ಜಾಲದಿಂದ ರವಾನೆಯಾಗುತ್ತಿದ್ದು ಕೆಲಸ ನಿರ್ವಹಿಸಲು ಮತ್ತು ಮುಗಿದಿರುವ ಕೆಲಸ ಕಳುಹಿಸಲು ಸಹ ಅಂತರ್ಜಾಲ ಅತ್ಯವಶ್ಯಕವಾಗಿರುತ್ತದೆ. ಅನಿವಾರ್ಯ ಕಾರಣಗಳಿಂದ ನನ್ನ ಕೆಲಸವನ್ನು ದಿನಾಂಕ 29 ನವೆಂಬರ್ 2012ರ ರಾತ್ರಿ ಮನೆಯಿಂದ ನಿರ್ವಹಿಸಬೇಕಾಗಿತ್ತು. ಇದಕ್ಕಾಗಿ ನಾನು ನನ್ನ ಮೊಬೈಲ್ (8892279989) ನಿಂದ ಕಂಫ್ಯೂಟರ್ ಗೆ ಅಂತರ್ಜಾಲದ ಸೌಲಭ್ಯ ವನ್ನು ದಿನಾಂಕ 27 ನವೆಂಬರ್ 2012 ರಂದು *234*114# ಡಯಲ್ ಮಾಡುವ ಮೂಲಕ ಪಡೆದಿದ್ದೆ. ಎರ್ ಸೆಲ್ ನಿಂದ Thank you for subscribing to KTKP114. You will be auto-renewed at the end of the validity. Please visit *234*111# or call 121 to deactivate. ಎಂದು SMS ಬಂದಿರುತ್ತದೆ. ನಾನು ಕೆಲಸ ಪ್ರಾರಂಬಿಸುವ ಮುನ್ನ 64 ರೂ ಬ್ಯಾಲೆನ್ಸ್ ಇತ್ತು. ಆ ದಿನ auto-renew ಆದರೂ ಕೂಡ 50 ರೂ ಬ್ಯಾಲೆನ್ಸ್ ಉಳಿಯಬೇಕಿತ್ತು. ಆದರೆ ಎರ್ ಸೆಲ್ ನವರು ರಾತ್ರಿ 12 ರ ನಂತರ ಪೂರ್ತಿ ಹಣ ನುಂಗಿರುವುದಲ್ಲದೆ ನನ್ನ ಕಂಫ್ಯೂಟರ್ ನ ಅಂತರ್ಜಾಲವನ್ನು ಕಡಿತಗೊಳಿಸಿದ್ದರು. ಆಗ ನನ್ನ ಕೆಲಸ ನಿರ್ವಹಿಸಲು ಸಾದ್ಯವಾಗದೆ ಕರೆನ್ಸಿ ಇಲ್ಲದ ಕಾರಣ ಯಾರನ್ನು ಸಂಪರ್ಕಿಸಲೂ ಸಹ ಸಾದ್ಯವಾಗಲ್ಲಿಲ್ಲ. ಆಗ ನಾನು ಸುಮಾರು ರಾತ್ರಿ 3 ಗಂಟೆ ವೇಳೆಗೆ ಎರ್ ಸೆಲ್ ಕಸ್ಟಮರ್ ಕೇರ್ ಅನ್ನು ಸಂಪರ್ಕಿದಾಗ ರಾತ್ರಿ 12 ಗಂಟೆಯಿಂದ ರಾತ್ರಿ ೦1 ಗಂಟೆಯವರೆಗು ನೀವು ಅಂತರ್ಜಾಲವನ್ನು ಬಳಸಿರುತ್ತೀರಿ ಆದ್ದರಿಂದ ನಿಮ್ಮ ಅಕೌಂಟ್ ನಲ್ಲಿದ್ದ ಬಾಕಿ ಹಣ ಕಡಿತಗೊಂಡಿರುವುದಾಗಿ ತಿಳಿಸಿದರು.ಆಗ ನಾನು You will be auto-renewed at the end of the validity. ಇದರ ಅರ್ಥವನ್ನು ತಿಳಿಯಬಯಸಿದಾಗ ಕಂಪನಿಯವರು ಹೇಳಿರುವುದನ್ನು ಮಾಡುವುದಸ್ಟೆ ನಮ್ಮ ಕೆಲಸ ಎಂದು ಕರೆಯನ್ನು ನಿಶ್ಕ್ರಿಯ ಗೊಳಿಸಿದರು. ಮಾರನೆಯದಿನ ಆಫೀಸ್ ಗೆ ಹೋದಾಗ ನಿನ್ನೆ ರಾತ್ರಿ ನೀವು ಬೇಜಾವಾಬ್ದಾರಿಯಿಂದ ಕೆಲಸ ನಿರ್ವಹಿಸದೆ ಇದ್ದುದ್ದರಿಂದ ಮತ್ತು ಯಾರನ್ನು ಸಂಪರ್ಕಿಸದಿದ್ದುರಿಂದ ಒಬ್ಬ ಕಸ್ಟಮರ್ ನಿಂದ 20, 000 ಡಾಲರ್ ನಂತೆ ನಸ್ಟ ವಾಗಿರುವುದಾಗಿ ತಿಳಿಸಿ ಇದರ ಬಾಗವಾಗಿ ನಿಮಗೆ ಬರಬಹುದಾದ ಬಡ್ತಿ, ಇನ್ ಕ್ರಿಮೆಂಟ್, ಮುತ್ತಾದುವುಗಳನ್ನು ತಡೆ ಹಿಡಿಯಲಾಗುವುದೆಂದು ಕೆಲಸದಿಂದ ತೆಗೆಯಲೂ ಪ್ರಯತ್ನಿಸಲಾಗುವುದೆಂದು ತಿಳಿಸಿದರು. ಆದ್ದರಿಂದ ಈ ರೀತಿಯ ಗ್ರಾಹಕರನ್ನು ಮೋಸಗೊಳಿಸುವ ಮತ್ತು ಅಮಾಯಕರಿಂದ ಹಣ ದೋಚುತ್ತಿರುವ ಎರ್ ಸೆಲ್ ನ SMS ಅನ್ನು You will be auto-renewed at the end of the your account / Pocket balance ಅಂತ ಬದಲಾಯಿಸಬೇಕೆಂತಲು ಮತ್ತು ಇದರ ಪರಿಹಾರವಾಗಿ 20, 000 ಡಾಲರ್ (ಒಂದು ಕೋಟಿ ರೂ) ನೀಡಬೇಕೆಂದು ಗ್ರಾಹಕ ನ್ಯಾಯಲಯಕ್ಕೆ ದೂರು ನೀಡಿರುತ್ತೇನೆ.

ಇಂತಿ

ಬೈರೇಗೌಡ


Company: Air cel

Country: India

Category: Internet & Web

0 comments

Information
Only registered users can leave comments.
Please Register on our website, it will take a few seconds.




Quick Registration via social networks:
Login with FacebookLogin with Google